Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ದರ್ಶನ್ ಪ್ರಕರಣ ಎಲ್ಲರಿಗೂ ಪಾಠ ಎಂದ ರವಿ ಬೆಳಗೆರೆ

ಇಡೀ ಚಿತ್ರರಂಗ, ಅಭಿಮಾನಿಗಳು ಹಾಗೂ ದರ್ಶನ್ ಕುಟುಂಬ ದರ್ಶನ್ ಬಿಡುಗಡೆ ವಿಷಯ ತಿಳಿದು ತುಂಬಾ ಸಂತೋಷಗೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರೆಲ್ಲರೂ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ತಮ್ಮ ಸಮಯೋಚಿತ ಹಿತೋಪದೇಶ ನೀಡಿದ್ದಾರೆ.

ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ ರವಿ ಬೆಳಗೆರೆ "ಎಲ್ಲಾ ಸಂಸಾರಗಳಲ್ಲಿ ಜಗಳ-ಮನಸ್ತಾಪ ಸಹಜ, ಸಾಮಾನ್ಯ. ಆದರೆ ಅತಿರೇಕಕ್ಕೆ ಹೋಗಬಾರದು. ಏನೇ ಮಾಡಿದರೂ ಹಣ ಹಾಗೂ ಖ್ಯಾತಿಯ ಬಲದಿಂದ ಅವನ್ನೆಲ್ಲಾ ಮೆಟ್ಟಿ ನಿಲ್ಲಬಹುದೆಂಬ ಯೋಚನೆ ಮೂರ್ಖತನವಾಗುತ್ತದೆ. ದರ್ಶನ್ ಪ್ರಕರಣ ಎಲ್ಲರಿಗೂ ಒಂದು ಪಾಠ" ಎಂದಿದ್ದಾರೆ.

ಈ ಹಿತೋಪದೇಶದ ಮೂಲಕ ಬಿಡುಗಡೆಯ ಭಾಗ್ಯ ಕಂಡಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ಗೆ ವೈಯಕ್ತಿಕ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವ ಹೇಳಿರುವ ಬೆಳಗೆರೆ ಇನ್ನು ಮುಂದೆ ಹೆಚ್ಚಿರುವ ಜವಾಬ್ದಾರಿಯ ಬಗ್ಗೆಯೂ ನೇರವಾಗಿಯೇ ಎಚ್ಚರಿಸಿದ್ದಾರೆ.

Read Archieves of 07 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books