ನೆಹರೂ ಪ್ರೇಯಸಿ ಶ್ರದ್ಧಾ ಬೆಂಗಳೂರಿನಲ್ಲಿ ಗಂಡು ಮಗು ಹೆತ್ತಳಾ?
ನೆಹರೂಗೆ ಎಷ್ಟು ಮಕ್ಕಳು?
ಇಂದಿರಾ ಗಾಂಧಿಯೊಬ್ಬಳೇನಾ? ಇನ್ನೊಬ್ಬ ಮಗ ಹುಟ್ಟಿದ್ದನಾ? ಅವನು ಹುಟ್ಟುವಾಗಲೇ ಸತ್ತಿದ್ದನಾ? ಬೆಂಗಳೂರಿನ ಕ್ರೈಸ್ತ ಕಾನ್ವೆಂಟೊಂದರಲ್ಲಿ ಆ ಮಗುವಿನ ಜನನವಾಯಿತಾ? ಆ ಮಗು ಬದುಕಿದೆಯಾ? ಬದುಕಿದ್ದುದೇ ಆದರೆ ಅದಕ್ಕೀಗ ಎಷ್ಟು ವರ್ಷ?
ಇವೆಲ್ಲ ಜಿಜ್ಞಾಸೆಗಳು ಇವತ್ತಿಗೂ ಜಾರಿಯಲ್ಲಿವೆ.
ಇವುಗಳಿಗೆಲ್ಲ ಜೀವ ಕೊಟ್ಟವನು ನೆಹರೂ ಪಾಲಿಗೆ ನೆರಳಿನಂತಿದ್ದ , ಆಪ್ತ ಸಹಾಯಕನೂ ಆಗಿದ್ದ ಎಂ.ಓ.ಮಥಾಯ್.
ಅಸಲು ಆಕೆಯ ಹೆಸರೇನು ಎಂಬುದು ಇಂದಿಗೂ ನಿಗೂಢ. ಆಕೆಯ ಬಗ್ಗೆ ಬರೆದವರೆಲ್ಲರೂ ಶ್ರದ್ಧಾ ಮಾತಾ ಅಂತಲೇ ಬರೆಯುತ್ತಾರೆ. ಅವಳು ಜೈಪೂರ್ ನಗರದವಳಾ? ಗೊತ್ತಿಲ್ಲ. ಜೈಪೂರ್ನ ಅರಸರ ಕೋಟೆಯಂಥ ಜಹಗೀರಿನ ಮನೆಯೊಂದರಲ್ಲಿ ಇದ್ದವಳಂತೂ ಹೌದು. ಆಕೆಗೆ ನೆಹರೂ ಜೊತೆಗೆ ಸಂಬಂಧವಿದ್ದುದು ನಿಜ ಎಂದು ಎಂ.ಓ ಮಥಾಯ್ ಬರೆಯುತ್ತಿದ್ದಂತೆಯೇ, 1978ರ ಫೆಬ್ರುವರಿಯಲ್ಲಿ `ಇಂಡಿಯಾ ಟುಡೇ' ಪತ್ರಿಕೆಯವರು ಶ್ರದ್ಧಾ ಮಾತಾ ಬಗ್ಗೆ ತನಿಖೆ ನಡೆಸುತ್ತಾರೆ. ಜೈಪುರಕ್ಕೆ ವರದಿಗಾರರನ್ನು ಕಳಿಸುತ್ತಾರೆ.
ಎಂಥ ಚತುರ ಛಿನಾಲಿಯೆಂದರೆ `ಇಂಡಿಯಾ ಟುಡೇ' ಪತ್ರಿಕೆಯ ಇಬ್ಬರು ವರದಿಗಾರರನ್ನೂ, ಅದರ ಸಂಪಾದಕರನ್ನೂ ಮರುಳು ಮಾಡಿದ ಶ್ರದ್ಧಾ ಮಾತಾ ಭಯಂಕರ ಸುಳ್ಳುಬುರುಕಿ. ಅದರ ಬದಲಿಗೆ ಫೆಬ್ರುವರಿ ಹದಿನೈದು,1978ರಂದು ಡೆಕ್ಕನ್ ಹೆರಲ್ಡ್ನಲ್ಲಿ ವರದಿಗಾರ ವಿ.ಫ್ರೆಡೆರಿಕ್ ಇಗ್ನೇಷಿಯಸ್ ಒಂದು ವರದಿ ಪ್ರಕಟಿಸಿದ್ದಾರೆ. ಅದು ಕೊಂಚ ಸತ್ಯಕ್ಕೆ ಹತ್ತಿರವಿದ್ದಂತಿದೆ. ಅದರಲ್ಲಿ ಏನು ಬರೆದಿದೆಯೋ ನೋಡಿ.
ಎಂ.ಓ.ಮಥಾಯ್ ಬರೆದ ಘೆಛಿe Zb eಜಿo ಡಿಟಞಛ್ಞಿ ಅಧ್ಯಾಯದಲ್ಲಿ ಅವರು `ಉತ್ತರ ಹಿಂದೂಸ್ತಾನದ ಸ್ಫುರದ್ರೂಪಿ ಯುವತಿಯೊಬ್ಬಳು ಬೆಂಗಳೂರಿನ ಕ್ರಿಶ್ಚಿಯನ್ ಆಶ್ರಮ (ಕಾನ್ವೆಂಟ್) ವೊಂದಕ್ಕೆ ಬಂದು, ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು ಮತ್ತು ಮಗುವನ್ನು ಆಶ್ರಮದಲ್ಲೇ ಬಿಟ್ಟು ಹೊರಟು ಹೋದಳು ಎಂದು ಬರೆಯುತ್ತಾರೆ. ಅದೇ ಮಥಾಯ್ ಅವರು, ಹುಟ್ಟಿದ ಮಗುವಿನ ಬಗ್ಗೆ ಉಳಿದ್ಯಾರಿಗೂ ಸುಳಿವು ಸಿಗದೆ ನಾನು ವಿಚಾರಣೆ ಮಾಡಿದೆ. ಆದರೆ ಆ ಮಗು ಎಲ್ಲಿದೆಯೆಂಬುದು ಗೊತ್ತೇ ಆಗಲಿಲ್ಲ. ಸಾಮಾನ್ಯವಾಗಿ ಕ್ರಿಶ್ಚಿಯನ್ ಕಾನ್ವೆಂಟ್ ಗಳು ಇಂಥ ವಿಷಯದಲ್ಲಿ ತುಂಬ ಕಟ್ಟು ನಿಟ್ಟಾಗಿ, ರಹಸ್ಯವಾಗಿ ಇರುತ್ತವೆ. ಯಾವ ಕಾರಣಕ್ಕೂ ಬಾಯಿ ಬಿಡುವುದಿಲ್ಲ. ಹೀಗಾಗಿ, ಆ ಮಗುವಿನ ಬಗ್ಗೆ ಮಾಹಿತಿ ತಿಳಿಯಲಿಲ್ಲ. ತಿಳಿದಿದ್ದಿದ್ದರೆ ಆ ಮಗುವನ್ನು ನಾನೇ ದತ್ತು ತೆಗೆದುಕೊಳ್ಳುತ್ತಿದ್ದೆ. ತನ್ನ ತಂದೆ ಯಾರೆಂಬುದೇ ತಿಳಿಯದೆ, ಸಂತೋಷಕರವಾಗಿ ಆ ಮಗುವು ಕ್ರಿಶ್ಚಿಯನ್ ಕೆಥೋಲಿಕ್ ಆಗಿ ಬೆಳೆಯಬಹುದಿತ್ತು" ಎಂದು ಬರೆಯುತ್ತಾರೆ.
ಆದರೆ ಸತ್ಯ ಸಂಗತಿಯೆಂದರೆ, ಶ್ರದ್ಧಾ ಮಾತಾ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ ಯುವತಿಯೊಬ್ಬಳು ಮೇ 1949ರಲ್ಲಿ ಬೆಂಗಳೂರಿಗೆ ಬಂದದ್ದು ನಿಜ. ಹದಿನೈದು ದಿನಗಳ ನಂತರ ಇಲ್ಲಿನ ರೋಮನ್ ಕೆಥೋಲಿಕ್ ಆಸ್ಪತ್ರೆಯಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದೂ ನಿಜ. ಆದರೆ ಮಗು, ಹುಟ್ಟುವಾಗಲೇ ಸತ್ತಿತ್ತು. ಶ್ರದ್ಧಾ ಮಾತಾ ಕ್ರೈಸ್ತ ಕಾನ್ವೆಂಟಿನಲ್ಲಿ ಉಳಿದಿದ್ದಳೆಂಬುದು ಸುಳ್ಳು. ಆಕೆ ಉಳಿದುಕೊಂಡದ್ದು ಬೆಂಗಳೂರಿನ ಬೆನ್ಸನ್ ಟೌನಿನ ಒಂದು ಮನೆಯಲ್ಲಿ. ಆಕೆ ವಾಪಸು ಹೋದಾಗ ಜವಾಹರ್ಲಾಲ್ ನೆಹರೂ ಬರೆದ ಕೆಲವು ಪ್ರೇಮ ಪತ್ರಗಳ ಒಂದು ಕಂತನ್ನು ಬಿಟ್ಟು ಹೋಗಿದ್ದಳು. ಆ ಪತ್ರಗಳನ್ನು ನೆಹರೂಗೆ ತಲುಪಿಸಿದ್ದು ಕ್ರೈಸ್ತ ಕಾನ್ವೆಂಟಿನವರಲ್ಲ. ಆದರೆ ಅವುಗಳನ್ನು ತಲುಪಿಸಿದವರು ಇಂಗ್ಲಿಷ್ ಪ್ರೊಫೆಸರರೂ, ಹಿಂದಿ ವಿದ್ವಾಂಸರೂ ಆದ ಡಾ.ಕರಮ್ ಚಂದ್ ವಾಡೆ. ಅವರು ಬೆಂಗಳೂರಿನ ಕಾಕ್ಸ್ ಟೌನಿನ ನಿವಾಸಿ. ಅವರಿಗೆ ಆ ಪ್ರೇಮ ಪತ್ರಗಳು ಹೇಗೆ ಸಿಕ್ಕಿದವು ಎಂಬುದು ಬೇರೆ ವಿಷಯ.
ಆದರೆ ಎಂ.ಓ.ಮಥಾಯ್ ಪ್ರಕಾರ ಬೆಂಗಳೂರಿನ ಕೆಥೋಲಿಕ್ ಕಾನ್ವೆಂಟಿನವರು ದಿಲ್ಲಿಗೆ ಅದೊಂದು ದಿನ ಒಬ್ಬ ಸಭ್ಯ ಗೃಹಸ್ಥನನ್ನು ಕಳಿಸಿದರು. ಅದು 1949ರ ನವೆಂಬರ್ ತಿಂಗಳು. ಬಂದ ಸಭ್ಯನ ಕೈಯಲ್ಲಿ ಕೆಲವು ಪತ್ರಗಳ ಕಂತೆಯಿತ್ತು. ಉತ್ತರ ಹಿಂದೂಸ್ತಾನದ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕ್ರೈಸ್ತ ಕಾನ್ವೆಂಟಿನಲ್ಲಿ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಆಕೆ ತನ್ನ ಬಗ್ಗೆ ಯಾವುದೇ ವಿವರ ನೀಡಲು ಸಿದ್ಧಳಿರಲಿಲ್ಲ. ಆಕೆ ಕೆಲ ದಿನ ಇದ್ದು, ಹೆರಿಗೆಯನಂತರ ಓಡಾಡುವ ಮಟ್ಟಿಗೆ ಸ್ಥಿರಳಾದ ಮೇಲೆ ಅಲ್ಲಿಂದ ಹೊರಟು ಹೋದಳು. ಮಗುವನ್ನು ಮಾತ್ರ ಕೊಂಡೊಯ್ಯಲಿಲ್ಲ. ಹಾಗಂತ ಮಥಾಯ್ ಬರೆಯುತ್ತಾರೆ.
ಆದರೆ ಸತ್ಯ ಸಂಗತಿಯೇನೆಂದರೆ, ಉತ್ತರ ಭಾರತದಿಂದ ಬಂದ ಶ್ರದ್ಧಾ ಮಾತಾ ಎಂಬ ಸುಂದರ ಯುವತಿಯನ್ನು ಆರೈಕೆ ಮಾಡಿದವರು ಡಾ.ಎಜೆಕೀಲ್ ಮತ್ತು ಅವರ ಪತಿ. ಅವರು ಮೇ ಮೂವತ್ತರಂದು ಶ್ರದ್ಧಾಳನ್ನು ಆಸ್ಪತ್ರೆಗೆ ಸೇರಿಸಿದಾಗ ಅಂದು ಜನಿಸಿದ್ದು ಸತ್ತ ಮಗು. ಆ ನಂತರ ಆಕೆಯನ್ನು ಬೆನ್ಸನ್ ಟೌನಿನ ಮನೆಗೆ ಕರೆದೊಯ್ಯಲಾಯಿತು. ಅವತ್ತು ತಾರೀಖು ಜೂನ್ ಒಂಬತ್ತು. ಮುಂದೆ ಜೂನ್ ಹತ್ತೊಂಬತ್ತರಂದು ಆಕೆ ಬೆಂಗಳೂರಿನಿಂದ ದಿಲ್ಲಿಗೆ ಹೊರಟು ಹೋದಳು.
ಆದರೆ ಹೋಗುವ ಮುನ್ನ ಆಕೆ ಒಂದು ಚೀಲವನ್ನು ಇಲ್ಲೇ ಬಿಟ್ಟು ಹೋಗಿದ್ದು, ಅದರಲ್ಲಿ ಅನೇಕ ಪತ್ರಗಳಿದ್ದವು. ಕೆಥೋಲಿಕ್ ಕಾನ್ವೆಂಟ್ ನ ಮದರ್ ಸುಪೀರಿಯರ್ ವಿದೇಶೀಯಳಾದ್ದರಿಂದ ಅವುಗಳನ್ನು ಓದಿಸಿ, ಇಂಗ್ಲಿಷಿನಲ್ಲಿ ಭಾಷಾಂತರ ಮಾಡಿಸಿಕೊಂಡು ಅವೆಲ್ಲವೂ ಪ್ರಧಾನಮಂತ್ರಿಗಳು ಬರೆದ ಪತ್ರಗಳೆಂದು ಮನಗಂಡಳು. ಆದರೆ ಆ ಪತ್ರಗಳನ್ನು ದಿಲ್ಲಿಗೆ ತಂದಾತ, ತಾನು ಯಾರೆಂಬುದಾಗಲೀ, ಆ ಕ್ಯಾಥೊಲಿಕ್ ಕಾನ್ವೆಂಟ್ ಯಾವುದೆಂಬುದಾಗಲೀ, ಮದರ್ ಸುಪೀರಿಯರ್ ಳ ಹೆಸರೇನೆಂಬುದಾಗಲೀ ಹೇಳಲಿಲ್ಲ. ಪತ್ರಗಳನ್ನು ನೆಹರೂಗೆ ಕೊಡಲಾಯಿತು. ತುಂಬ ನಿರ್ಭಾವುಕರಾಗಿ ಅವರು ಅವೆಲ್ಲವನ್ನೂ ಹರಿದು ಹಾಕಿದರು. ಅಷ್ಟೆ ಅಲ್ಲ, ಆಗಲೂ ಆ ನಂತರೂ ನೆಹರೂ ಮಗುವಿನ ಬಗ್ಗೆ ಯಾವುದೇ ಆಸಕ್ತಿ ತೋರಲಿಲ್ಲ ಎಂದು ಮಥಾಯ್ ಬರೆಯುತ್ತಾರೆ.
ಆದರೆ, ಈಗ ಎಂಬತ್ತೈದು ವರ್ಷ ವಯಸ್ಸಾದ ಡಾ.ಕರಮ್ಚಂದ್ ವಾಡೆ ಹೇಳುವುದೇ ಬೇರೆ. ಅವರ ಪ್ರಕಾರ ನೆಹರೂ ಕೈಗೆ ಆ ಪತ್ರಗಳನ್ನು ಕೊಟ್ಟಾಗ ಅವರು ಪ್ರೀತಿಯಿಂದ, ಕಕ್ಕುಲತಿಯಿಂದ ಆ ಪತ್ರಗಳನ್ನು ಇಸಿದುಕೊಂಡರು. ಅವುಗಳ ಪೈಕಿ ಒಂದು ಪತ್ರವನ್ನು ಅವರೇ ಝೆರಾಕ್ಸ್ ಮಾಡಿಸಿ, ಕೃತಾರ್ಥ ಭಾವದಿಂದ ಡಾ. ಕರಮ್ಚಂದ್ ವಾಡೆ ಅವರಿಗೆ ಕೊಟ್ಟರು. ಜೊತೆಗೆ ತಾವು ಬರೆದ ಪುಸ್ತಕಕ್ಕೆ ಆಟೋಗ್ರಾಫ್ ಕೂಡ ಹಾಕಿ ಕೊಟ್ಟರು. ಅದೆಲ್ಲ ನಡೆಯುತ್ತಿದ್ದಾಗ ನೆಹರೂ ಅವರ ಸಹಾಯಕ ಎಂ.ಓ.ಮಥಾಯ್ ಆ ಕೋಣೆಯಲ್ಲಿ ಇರಲಿಲ್ಲ. ನೆಹರೂ ಅವರು ಇನ್ನು ಮೇಲಿಂದ ತಮಗೆ ಪತ್ರ ಬರೆಯುವುದಾದರೆ ತಮ್ಮ ಸೆಕ್ರೆಟರಿಗಳಲ್ಲಿ ಒಬ್ಬರಾದ ಉಪಾಧ್ಯಾಯ ಅವರಿಗೇ ಬರೆಯಬೇಕೆಂದು ಹೇಳಿದರು ಅನ್ನುತ್ತಾರೆ ಡಾ.ಕರಮ್ ಚಂದ್.
ಇಷ್ಟಕ್ಕೂ, ಶ್ರದ್ಧಾ ಮಾತಾ ಹೆರಿಗೆಗೂ, ಆಸ್ಪತ್ರೆಗೂ, ಕಾನ್ವೆಂಟಿಗೂ, ಸಂಬಂಧವೇ ಇಲ್ಲದ ಕರಮ್ಚಂದ್ ಅವರಿಗೆ ನೆಹರೂ ಬರೆದ ಪ್ರೇಮ ಪತ್ರಗಳು ಹೇಗನ್ನಿಸಿದವು? ಅದನ್ನು ಡೆಕ್ಕನ್ ಹೆರಲ್ಡ್ನ ಪತ್ರಕರ್ತ ಪತ್ತೆ ಹಚ್ಚುತ್ತಾನೆ. ಡಾ.ಕರಮ್ ಚಂದ್ ಅವರಿಗೆ ಕಾಕ್ಸ್ ಟೌನಿನ ವೀಲರ್ ರೋಡ್ ನಲ್ಲಿ ಕಟ್ಟಿಗೆ ದಿಮ್ಮಿ ಮಾರುವ ಅಂಗಡಿಯೊಂದರಲ್ಲಿ ಎಜಕೀಲ್ ಪರಿಚಯವಾಗುತ್ತಾನೆ. ಆತ ಕಟ್ಟಿಗೆ ದೊಡ್ಡಿಯಲ್ಲಿ ಪಾರ್ಟ್ನರ್. ಅವನು ಕೆಲವು ಹಿಂದಿ ಪತ್ರಗಳನ್ನು ಇಂಗ್ಲಿಷಿಗೆ ಅನುವಾದಿಸಲು ಡಾ.ಕರಮ್ ಚಂದ್ರನ್ನು ವಿನಂತಿಸುತ್ತಾನೆ. ನಂತರ ಆ ಪತ್ರಗಳನ್ನು ಡಾ.ಕರಮ್ ಚಂದ್ ಅವರಿಗೆ ಕೊಡುತ್ತಾನೆ. ಆ ಪೈಕಿ ಮೊದಲ ಪತ್ರ ಗವರ್ನಮೆಂಟ್ ಹೌಸ್, ಲಖನೌದಿಂದ 1948ರ ಮಾರ್ಚ್ ಎರಡರಂದು ಪೋಸ್ಟ್ ಆಗಿದ್ದು, ಅದು ನೆಹರೂ ಬರೆದ ಪತ್ರವೇ ಎಂಬುದು ಡಾ.ಕರಮ್ ಚಂದ್ ಅವರಿಗೆ ಖಾತರಿಯಾಗುತ್ತದೆ. ಆಗ ಹೊರಬೀಳುವುದೇ ನೆಹರೂ ಕಾಮವಿಲಾಸ ಯಾತ್ರೆ. |