Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ರಿಯಲೀ ಬ್ಯೂಟಿಫುಲ್ ಎಂಬ ಉದ್ಗಾರವೊಂದೇ ನೆನಪಿರಬೇಕು ನಮಗೆ!

"ನಿಮ್ಮ ಮಗು ತುಂಬ ಮುದ್ದಾಗಿದೆ" ಎಂಬುದು ಒಂದೇ ಸಲಕ್ಕೆ ಇಬ್ಬಿಬ್ಬರಿಗೆ ಕೊಡಮಾಡಬಹುದಾದ ಕಾಂಪ್ಲಿಮೆಂಟು: ಮುದ್ದಾಗಿರುವ ಮಗುವಿಗೂ ಅದರ ತಾಯಿಗೂ. ಒಂದು ಮಗು ಮುದ್ದಾಗಿದೆ ಅಂದರೆ ಅದ ರರ್ಥ ತಾಯಿ ಸುಂದರವಾಗಿದ್ದಾಳೆ, ತಂದೆ ಚೆಲುವ ಅಂತಲೇ ತಾನೆ? ಸೌಂದರ್ಯದ ವಿಷಯಕ್ಕೆ ಬಂದರೆ ನನ್ನದು ಮೊದಲಿಂದಲೂ ಇದೇ ನಿಲುವು. ನನ್ನ ತಂದೆ ತಾಯಿ ಇನ್ನೂ ಚೆನ್ನಾಗಿದ್ದಿದ್ದರೆ ನಾನು ಮತ್ತಷ್ಟು ಸುಂದರನಾಗಿರುತ್ತಿದ್ದೆ.

ಯೂರಪ್‌ಗೆ ಹೋದಾಗ ಈ ಪ್ರಶ್ನೆ ನನ್ನನ್ನು ಮತ್ತೂ ಕಾಡಿತು. ನಾನು ಸಾಧಾರಣ ಎತ್ತರದವನು. ಕೊಂಚ ಗೂನ. ಈಗ ತೂಕ ಕಳೆದುಕೊಂಡಾದ ನಂತರ ಕೊಂಚ shrink ಆದಂತೆಯೂ ಕಾಣುತ್ತೇನೆ. "ಅಣ್ಣಾ ನೀವು ಸ್ಟೇಜಿನ ಮೇಲೆ ಬಂದ್ರೆ ಮೊದಲೆಲ್ಲ ಹುಲಿ... ಹುಲಿ ಬಂದಂಗಾಗ್ತಿತ್ತು. ಈಗ ತೆಳ್ಳಗಾಗಿ ಬಿಟ್ರಿ!" ಅಂತ ಹುಡುಗನೊಬ್ಬ ಅಂದಾಗ ನಕ್ಕು ಹೇಳಿದ್ದೆ: ದಿನಕ್ಕೊಂದು ಹುಲಿ ಬನ್ನೇರುಘಟ್ಟದಲ್ಲಿ ಸಾಯ್ತಿದೆ, ಸುಮ್ಮಿರು!

ಆದರೆ ಸಾಕಷ್ಟು ಕೃಶನಾದ ನನಗೆ ಆಮ್‌ಸ್ಟರ್ ಡ್ಯಾಮ್‌ನ ಡಚ್ಚರು ನಿಜಕ್ಕೂ ಇನೀರಿಯಾರಿಟಿ ಹುಟ್ಟಿಸು ತ್ತಾರೆ ಅನ್ನಿಸಿಬಿಟ್ಟಿತು. ಅವರಲ್ಲಿ ತೀರ ಸಾಮಾನ್ಯರು ಕೂಡ ಆರೂವರೆ ಅಡಿ ಇರುತ್ತಾರೆ. ಏಳು-ಏಳುಕಾಲು ಅಡಿಯ ದೈತ್ಯರೂ ಇದ್ದಾರೆ. ಡಚ್ ಗಂಡಸರು ಸುಂದರ. ಜೊತೆಗೆ manly. ಅಲ್ಲಿನ ಹೈನು, ಕೃಷಿ ವಿಧಾನ, ಹವೆ, ಚಳಿಯ ವಿರುದ್ಧದ ಬಡಿದಾಟ- ಎಲ್ಲವೂ ಅವರನ್ನು ಧೃಡಗೊಳಿಸಿವೆ. ಡಚ್ ಹೆಂಗಸರೂ ಸಾಕಷ್ಟು ಧೃಡದೇ ಹಿಗಳು. ಅದೇ ಹಂಗೆರಿಯನ್ನರು ಪುಟ್ಟಪುಟ್ಟಗೆ ಚೆಂದ. ಇನ್ನು ನೀವು ಉಗಾಂಡಾ-ಕೀನ್ಯಾಗಳಿಗೆ ಹೋಗಿ ಬಿಟ್ಟರೆ ಅಲ್ಲಿ ಅತಿ ದೊಡ್ಡ ನಿತಂಬಗಳಿರುವ ಹೆಂಗಸು ಪರಮ ಸುಂದರಿ. ಎರಡು ಹೆಜ್ಜೆ ನಡೆದರೆ hipsನ ಆಗಾಧವೆಲ್ಲ heave ಆಗಬೇಕು. ಪಾಕಿಸ್ತಾನದ ಪೆಷಾವರದ ಸರ ಹದ್ದಿನ ಮುಸ್ಲಿಂ ಹೆಂಗಸರ ಚೆಂದವೇ ಬೇರೆ. ಯುರೇ ಷಿಯನ್ ಹೆಂಗಸರ ಕೋಲು ಕೋಲು ಮುಖ, ನೀಲಿ ನೀಲಿ ಕಣ್ಣು, ನೀಳನೀಳ ದೇಹ: ಓಹ್! ರಷಿಯನ್ನರು ಬಿಡಿ: ಅವರು ಜಿಮ್ನಾಸ್ಟಿಕ್ಸ್‌ನಲ್ಲಿ, ಬೆಲ್ಲಿ ಡಾನ್ಸ್‌ನಲ್ಲಿ, ಬೆಡ್‌ನಲ್ಲಿ- ಎಲ್ಲೆಡೆಗೂ ಅದ್ಭುತ ಪಟುಗಳೇ. True athletes. ಅಮೆರಿಕನ್ನರು ದಡಿಯರು. ಜರ್ಮನ್ನರು ನಿರ್ಭಾವುಕ ಸಿಡುಕರು. ಜಪಾನೀಯರು ಇನ್ನು ಪೂರ್ತಿ ಮಾನವರಾಗಿ evolve ಆಗಿಲ್ಲವೇನೋ ಅನ್ನಿ ಸುತ್ತಾರೆ. ಚೀನಾದವರನ್ನು ನೋಡದಿರುವುದೇ ಕ್ಷೇಮ. ಸ್ವಿಸ್‌ನವರು ಕಿನ್ನರ ಕಿಂಪುರುಷರಿದ್ದಂತೆ. ಆದರೆ ವೆನೆ ಜೂಲಾದ ಹುಡುಗಿಯೊಬ್ಬಳು ಜಗತ್ ಸುಂದರಿ ಸ್ಪರ್ಧೆಯಲ್ಲಿ ಗೆದ್ದಾಗ: ಅಸಲು ಚೆಲುವಿಕೆ ಅಂದರೇ ನರ್ಥ ಅಂತ ಯೋಚಿಸಿದ್ದೆ.

ಸೌಂದರ್ಯದ concept ಮನುಷ್ಯನಿಂದ ಮನುಷ್ಯ ನಿಗೆ, ಸಂದರ್ಭದಿಂದ ಸಂದರ್ಭಕ್ಕೆ, ಮನಸ್ಥಿತಿಯಿಂದ ಮನಸ್ಥಿತಿಗೆ ಬದಲಾಗುತ್ತದೆ. Fashion ಕೂಡ ಅಷ್ಟೆ. ಕಾಮಾತುರದಲ್ಲಿದ್ದ ಕುಡುಕನೊಬ್ಬ 'ಚಟಕ್ಕೆ ಬುದ್ಧಿ ಯಿರುವುದಿಲ್ಲ. ಆ ಮುದ್ಕೀನೇ ಕರೀರಿ' ಅಂದನಂತೆ ಎಂಬ ಉರ್ದು ನಾಣ್ಣುಡಿಯಿದೆ. ತುಂಬ ಕುರೂಪಿ ಯಾದ ಮಾವುತನನ್ನು ಆ ಪರಿ ಬಯಸಿದಳಲ್ಲ ಅಮೃತ ಮತಿ? ಅದರ ಹಿಂದೆ ಯಾವ Logic ಇದೆ? ಹೆತ್ತ ವರಿಗೆ ಹೆಗ್ಗಣ ಮುದ್ದು ಅನ್ನುತ್ತೇವೆ. ಹೆಗ್ಗಣಗಳಂತಿ ರುವವರನ್ನು ಮುದ್ದಿಸುವ, ಅವರಿಗೂ ಮರಿ ಹಾಕಿ ಸುವ ಜನ ಇದ್ದೇ ಇರುತ್ತಾರಲ್ಲವೆ? ಕನ್ನಡಿಯ ಮುಂದೆ ನಿಂತಾಗ ಒಮ್ಮೊಮ್ಮೆ ಅದೆಲ್ಲಿಂದಲೋ ಕಾನಿಡೆನ್ಸ್ ಜಿಗಿದು ನಿಲ್ಲುತ್ತದೆ: ಐ I am handsome. ಬೊಜ್ಜು ನಮ್ಮ ಪಕ್ಕದಲ್ಲೇ ಮಲಗಿದಾಗ ಮನಸು ಬೇಸರದಿಂದ ಕೂಗುತ್ತದೆ: 'ನಿಂಗೆ ವಯಸ್ಸಾಯ್ತು!'. ಹಾಗಾದರೆ ಅಷ್ಟಿಷ್ಟು ಬೊಜ್ಜು ಇಟ್ಟುಕೊಂಡು ಚೆಂದಗೆ ಕಾಣುವವ ರಿಲ್ಲವೆ? ಒಂದು ಕಾಲದ ಎನ್.ಟಿ.ರಾಮಾರಾವ್‌ನ ಹಾಗೆ. ನಮಗೆಲ್ಲ ಟೈಟ್ ಪ್ಯಾಂಟಿನ ರಾಜೇಶ್ ಖನ್ನಾ, ಬೆಲ್ ಬ್ಯಾಟ್ಸ್ ಧರಿಸಿದ ಅಮಿತಾಬ್ ಬಚ್ಚನ್, ಚಿಗುರು ಮೀಸೆಯ ರಾಜಕುಮಾರ್, ಮಟ್ಟಸ ದಾಡಿಯ ಕಬೀರ್ ಬೇಡಿ, ಕೆನ್ನೆಯ ಮೇಲೆ ಕುರುಪು ಕಾಟು ಗುರ್ತಿನ-ಸೊಟ್ಟಗಾಲಿನ ಶತೃಘ್ನ ಸಿನ್ಹಾ-

ಇವರೆಲ್ಲ ಏಕೆ ಇಷ್ಟವಾದರು? ಕನ್ನಡದ ಲೂಸ್ ಮಾದನನ್ನು ಹೀರೋ ಅಂತ ಒಪ್ಪಿಕೊಳ್ಳಲಿಕ್ಕೆ ಸಂಕೋಚ ವಾಗಲ್ಲವಾ? ಇವೆಲ್ಲ ರೂಪಕ್ಕೆ ಸಂಬಂಸಿದ ಪ್ರಶ್ನೆಗಳೇ. ನಾವು ಯಾರನ್ನೋ ಇಷ್ಟಪಡಲಿಕ್ಕೆ ರೂಪವೂ ಸೇರಿದಂತೆ ಅನೇಕ ಕಾರಣಗಳಿರಬಹುದು. ಇಷ್ಟಪಟ್ಟ ಮೇಲೆ ರೂಪ ವೆಂಬುದು ಒಂದು ಕಾರಣವೇ ಅಲ್ಲ ಅನ್ನಿಸಲೂಬ ಹುದು. ಆದರೆ ಪ್ರತೀ ದೇಶ, ಪ್ರತೀ ಜನಾಂಗ, ಪ್ರತೀ ಸಂಪ್ರದಾಯ ರೂಪ-ಕುರೂಪಗಳ ಒಂದು ಖಚಿತ ಸಿದ್ಧಾಂತ ಹೊಂದಿರುತ್ತದೆ. ದೊಡ್ಡ ಕಣ್ಣು, ನೇರ ಮೂಗು, ಪುಟ್ಟ ಬಾಯಿ, ತುಂಬು ಕೆನ್ನೆ- ಇವೆಲ್ಲ ಸ್ಟ್ಯಾಂಡರ್ಡ್ ಇಂಡಿಯನ್ ಮಾನದಂಡಗಳು. ಈಗಿನ ಹುಡುಗೀರಿಗೆ ಛ್ಟಿಟ ಜಿಜ್ಠ್ಟಛಿ ಖಾಯಿಲೆ. ಕೆನ್ನೆ ತುಂಬಬಾರದು. ಹೀಗಾಗಿ ಮುಖದ ತುಂಬ ಹಲ್ಲೇ ಕಾಣುತ್ತವೆ. ತೋಳು ತುಂಬೋ ಹಾಗಿಲ್ಲ. ಹೆಗಲಿನಿಂದ ಕೇರೆ ಹಾವೊಂದು ತಟಕ್ಕನೆ ಜೋತು ಬಿದ್ದಂತೆ ಭುಜ ಕಾಣುತ್ತದೆ. ಅವರನ್ನು ಪ್ರೀತಿ ಸುವವರಿಗೆ ಅದೇ ಚೆಂದ. ಅವರಿಗಾದರೂ ಮೀಸೆ ಯಿಲ್ಲದ, ಬೊಜ್ಜು ಕೂಡಿರದ, ಜಿಮ್ ಫಿಟ್ ಆದಂಥ ಹುಡುಗ ಇಷ್ಟ. ನಮ್ಮ ಕಾಲಕ್ಕೆ ದಾಂಡಿಗರಿಗೇ ಹುಡುಗಿ ಯರು ಮೀಸಲು ಎಂಬಂತಿತ್ತು. ಈಗ ಪ್ಯಾಂಟು ನೇತು ಬಿದ್ದಂತೆ ಕಾಣುವ, ಸೊಂಟ-ಹಿಪ್ಪು ಎರಡೂ ಇಲ್ಲದ ನರಪೇತಲ ಹುಡುಗನಿಗೆ ಕಾಂಪಿಟಿಷನ್‌ನ ಮೇಲೆ ಗೆಳತಿಯರು. ನಾಳಿನ ಫ್ಯಾಷನ್ ಇನ್ನು ಹೇಗೋ?

ಆದರೆ ನಮ್ಮ ಈ ದೈಹಿಕ ಅಪಿಯರೆನ್ಸ್, ನಮ್ಮ ಚೆಂದ, ನಮ್ಮ ಟಟho ಇವೆಲ್ಲ ನಮ್ಮನ್ನು ಇನ್ನೊಬ್ಬರೆದುರು ಸುಪೀರಿಯರ್ ಆಗಿ ಅಥವಾ ಇನೀರಿಯರ್ ಆಗಿ ಮಾಡಬೇಕೆ? ಮಾಡುವುದು ಸರಿಯೇ? ಅನೇಕರು ಬಹುಕಾಲದಿಂದ ಈ ಪ್ರಶ್ನೆಗೆ ಉತ್ತರ ಹುಡುಕಿ ಹೈರಾ ಣಾಗಿದ್ದಾರೆ. ಎಂಥ ಸುಂದರನಿಗೂ ನಾನು ಇನ್ನಷ್ಟು ಚೆಂದಗಿರಬೇಕಿತ್ತು ಅನಿಸುವ ಘಳಿಗೆಗಳು ಬರುತ್ತವೆ. ಎಂಥ ಮಾಮೂಲು ಹುಡುಗಿಗೂ 'ನಾನು ಯಾರಿಗಿಂತ ಕಡೆ?' ಎಂಬ ಹಮ್ಮು ಮೂಡಿ ನಿಲ್ಲುವ ಘಳಿಗೆಗಳೂ ಬರುತ್ತವೆ. ಅದಕ್ಕೇ ಹೇಳಿದ್ದು: ಟಟho ಎಂಬುದು ಅನೇಕ ಸಲ ನಮ್ಮ ಪರಿಸ್ಥಿತಿ ಮತ್ತು ಮನೋಸ್ಥಿತಿಯನ್ನು ಅವ ಲಂಬಿಸಿರುತ್ತವೆ. ನಿಜ, ನನ್ನ ದನಿ ಸ್ಥಿರವಾಗಿಲ್ಲ. ನಾನು ಕುಳ್ಳ. ನಾನು ಕರಿಯ. ನನಗೆ ಮೆಳ್ಳಗಣ್ಣು, ಕೊಂಚ ಉಗ್ಗು, ನಡೆಯುವಾಗ ಕಾಲೆಳೆಯುತ್ತೇನೆ ಮುಂತಾದ ಇನ್‌ಫೀರಿಯಾರಿಟಿಗಳು ಪ್ರತಿಯೊಬ್ಬರನ್ನೂ ಕಾಡುತ್ತವೆ.

ಕಾಡಲಿ ಬಿಡಿ. ಅಂಥವುಗಳನ್ನು ಆ ಕ್ಷಣಕ್ಕೆ ಅದು ಮಿಕ್ಕಿ, ಸೀಟಿ ಬಿಸಾಡಿ, ಕ್ಯಾಕರಿಸಿ, ಹೆಜ್ಜೆ ತುಳಿದು, ತೊಡೆ ಚಿಮ್ಮುತ್ತಾ ಮುಂದಕ್ಕೆ ಹೋಗುವುದನ್ನು ನಾವು ರೂಢಿಸಿ ಕೊಳ್ಳಬೇಕು. ಆದಷ್ಟೂ ಅಪಿಯರೆನ್ಸ್ ಕಡೆಗೆ ಗಮನ ಕೊಡೋಣ. ಸಾಧ್ಯವಾದರೆ ನಮ್ಮ ದಿರಿಸು, ಬೂಟು, ಕನ್ನಡಕ, ಹೇರ್‌ಕಟ್, ಡೈ ಅಥವಾ ಮೇಕಪ್‌ಗಳಿಂದ ಈ ಕೊರತೆಗಳನ್ನು ಸರಿಮಾಡಿಕೊಳ್ಳೋಣ. ಹಾಗಂತ ಈ ಸರಿಮಾಡಿಕೊಳ್ಳುವಿಕೆಗಳಲ್ಲೇ ನಮ್ಮ ಸಮಯ, ಎನರ್ಜಿ, ಶ್ರದ್ಧೆಗಳೆಲ್ಲ ವ್ಯಯವಾಗಿಬಿಡಬಾರದಲ್ಲ. ಇನ್ನು ಅರ್ಧಗಂಟೆಗೆ ನನ್ನ ಭಾಷಣವಿದೆ ಅಂತಾದರೆ, ನಾನು ಏನನ್ನು ಮಾತಾಡಬೇಕು ಎಂಬುದರ ಕುರಿತು ಯೋಚಿ ಸುತ್ತೇನೆಯೇ ಹೊರತು ಕಿತ್ತು ಹೋದ ನನ್ನ ಅಂಗಿ ಗುಂಡಿಯ ಅಥವಾ ನಲುಗಿದ ಇಸ್ತ್ರಿಯ ಬಗ್ಗೆ ಸುತರಾಂ ಯೋಚಿಸುವುದಿಲ್ಲ. ಅಲ್ಲಿ ನಾನು ಬಲಿಷ್ಠ ಶರೀರಿ-ಸುರದ್ರೂಪಿ-ಚಿರಯೌವನಿಗ ರವಿ ಬೆಳಗೆರೆ ಅಂತ mಟqಛಿ ಮಾಡಬೇಕಿಲ್ಲ. ನಾನು ಮಾಡಲಿರುವ ಭಾಷಣವಷ್ಟೆ ಮುಖ್ಯ. ಕೇಳಿದವರಿಗೆ ಬಹುಕಾಲ ನೆನಪಿರುವುದೂ ಅದೇ.

ಮುಖ ನೋಡಿ ಮಣೆ ಹಾಕುವುದು, ಗುಂಪಿನಲ್ಲಿ ಸುಂದರವಾದವರಿಗಷ್ಟೆ ಪ್ರಾಶಸ್ತ್ಯ ಕೊಡುವುದು, ಸೌಂದ ರ್ಯದ ಕಾರಣಕ್ಕೆ ಪ್ರಮೋಷನ್ ಸಿಗುವುದು-ಇದೆಲ್ಲ ಶಾಶ್ವತವಲ್ಲ. ಇದೊಂದು ತೆರನಾದ Zಜಿoಞಗೆ ಸಮಾನ. ದೊಡ್ಡ ಅಂಡಿನ ನೀಗ್ರೋ ಹುಡುಗಿ ಛ್ಟಿಟ ಜಿಜ್ಠ್ಟಛಿ ಗಳ ಕಚೇರಿಯಲ್ಲಿ ಇಉu ಹುದ್ದೆಗೆ ಬರಬಾರದೇಕೆ? ಸಿನೆಮಾ ಅಥವಾ ಫ್ಯಾಷನ್ ಪ್ರಪಂಚದ ಮಾತು ಬೇರೆ. ನಾವು ಯಥಾರ್ಥದ ಜಗತ್ತಿನಲ್ಲಿ ಬದುಕುತ್ತಿರುವವರು. ತೀರ ಮದುವೆಯಾಗುವ ಅಥವಾ ಸಂಬಂಧ ಏರ್ಪ ಡಿಸಿಕೊಳ್ಳುವ ವಿಷಯಕ್ಕೆ ಬಂದಾಗ ಸೌಂದರ್ಯಕ್ಕೆ ಮನ್ನಣೆ ಸಿಗಲಿ. ಅದು ಆಯ್ಕೆಯ, ಅಭಿರುಚಿಯ ಮಾತಾಯಿತು. ಆದರೆ ಸಾರ್ವಜನಿಕ ಜೀವನದಲ್ಲಿ? ಅದ್ಯಾವುದೂ ನಮ್ಮನ್ನು ಕಾಡಬಾರದು. ಬ್ಯೂಟಿಫುಲ್ ಅಂತ ಮನುಷ್ಯ ಸಂಕುಲ ಎಲ್ಲದಕ್ಕೂ ಉದ್ಗರಿಸಿದೆ: ಚ್ಝಿZh, oಞZ, ಚಿಜಿಜ, ಚ್ಟಿಟZb, ಠಿಜ್ಞಿqs, mಞmqs... ಎಲ್ಲದಕ್ಕೂ! ಇವೆಲ್ಲದಕ್ಕಿಂತ ನಮ್ಮ ಶುದ್ಧ ಮನಸುಗಳಿಗೆ, ಬುದ್ಧಿವಂತ ಮಿದುಳುಗಳಿಗೆ ಅದು "ರಿಯಲೀ ಬ್ಯೂಟಿಫುಲ್" ಅಂತ ಉದ್ಗರಿಸಿದೆ.

ಈ ಉದ್ಗಾರ ಮಾತ್ರ ನಮಗೆ ನೆನಪಿರಲಿ.

-ರವೀ

Read Archieves of 10 September, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books