Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಕಾದಂಬರಿಯ ಪುಟಗಳಲ್ಲಿ

ಎಲ್ಲೋ ಮುಸ್ಲಿಮರ ಬಗ್ಗೆ ಕಹಿ?

ಅಲ್ಲಿ ದೊಡ್ಡ ಹಬ್ಬ.

ಧೋ... ಸುರಿಯುತ್ತಿರುವ ಮಳೆಗೆ ಮುರ್ಡೇಶ್ವರದಲ್ಲಿ ಕುಳಿತ ಶಿವ ನಖಶಿಖ ತೊಯ್ಯುತ್ತಿದ್ದಾನೆ. ಶಿವನ ಪಾದ ತೋಯಿಸುತ್ತಿರುವ ಸಮುದ್ರಕ್ಕೆ ಏನೋ ಅಸಹನೆ. ಒಂದೇ ಸಮನೆ ತುಯ್ಯುತ್ತಿದೆ. ಭಟ್ಕಳದಲ್ಲಿ ಕೋರ್ಟು ಕರೆದಿತ್ತು. ಹಾಜರಾದವನು ಬೆರಳ ಗಾತ್ರಕ್ಕೆ ಬೀಳುತ್ತಿದ್ದ ಹನಿಗಳಿಗೆ ಮೈಯಾದೆ. ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಹೊಟೇಲಿನ ಆ ರೂಮು ನನಗೆ ತುಂಬ ಇಷ್ಟ. ೬೧೪ನೇ ನಂಬರಿನ ರೂಮು. ಎತ್ತ ನೋಡಿದರೂ ಸಮುದ್ರ ಕಾಣಿಸುತ್ತದೆ. ಈ ಹಿಂದೆ ಹೋದಾಗ ಬೆಳಗಿನ ಜಾವಕ್ಕೆಲ್ಲ ಎದ್ದು ಕಡಲಿಗೆ ಇಳಿಯುವ ಮೀನುಗಾರರು ಹಗಲು ಹುಟ್ಟುವ ಹೊತ್ತಿಗೆ ದಡಕ್ಕೆ ಹಿಂತಿರುಗಿ ಮೀನಿನ ರಾಶಿ ಹಾಕುತ್ತಿದ್ದುದನ್ನೂ, ಅವರ ಹೆಂಗಸರು ಅದಕ್ಕಾಗಿ ಕಾಯುತ್ತಿದ್ದುದನ್ನೂ ನೋಡು ತ್ತಿದ್ದೆ. ಈಗ ಶುದ್ಧ ಮಳೆಗಾಲ. ಕಡಲಿನ ಅಬ್ಬರಕ್ಕೆ ಬೆದರಿದ ದೋಣಿಗಳು ಬಲೆ ಮುದುರಿಕೊಂಡು ಅಲ್ಲೆಲ್ಲೋ ನಿಂತಿವೆ : ದೂರ. ಮೀನುಗಾರರು ಗುಡಿಸಲುಗಳಲ್ಲಿ ನಿರುಮ್ಮಳ ಕುಳಿತು ಗಂಜಿ ಉಂಡು ಕಳ್ಳು ಕುಡಿದು ಮೀನು ತಿನ್ನುತ್ತಾರೆ. ಇದು ಅವ ರಿಗೆ ರಜೆಯ ಕಾಲ.

ನಾನು ಸಮುದ್ರಮುಖಿ. ಸಿಟ್‌ಔಟ್‌ನಲ್ಲಿ ಮೇಜು ಕುರ್ಚಿ ಹಾಕಿಕೊಂಡು ಬೆಳಗಿನ ಜಾವದಿಂದಲೇ ಬರವಣಿಗೆ ಆರಂಭಿಸುತ್ತೇನೆ. ಕಾದಂಬರಿಗೆ ಸಂಬಂಸಿದ ಪುಸ್ತಕಗಳು, ನೋಟ್ಸು, ಇ-ಮೇಯ್ಲ್‌ಗಳು, ಫೊಟೋಗಳು ಎಲ್ಲ ಇಟ್ಟುಕೊಂಡು ಬರೆಯುತ್ತೇನೆ. ಒಮ್ಮೊಮ್ಮೆ, ಪತ್ರಿ ಕೋದ್ಯಮಕ್ಕೆ ಬರಲೇಬಾರದಿತ್ತು. ಸುಮ್ಮನೆ ಹೀಗೆ ಕಥೆ ಕಾದಂಬರಿ ಬರೆದು ಕೊಂಡು ಊರೂರು, ದೇಶ ದೇಶ ತಿರು ಗುತ್ತ ಇದ್ದು ಬಿಡಬೇಕಿತ್ತು ಅನ್ನಿಸುತ್ತದೆ. ಆದರೆ 'ಪತ್ರಿಕೆ' ನನಗೆ ಅನ್ನ ಕೊಟ್ಟ

ಅಮ್ಮ. ಕೋರ್ಟು ಕಚೇರಿ, ವ್ಯಾಜ್ಯ, ಒಡಂಬಡಿಕೆಗಳ ಮಧ್ಯದಲ್ಲೇ ಬರ

ವಣಿಗೆಯನ್ನೂ ಬದುಕನ್ನೂ ಸವಿಯಬೇಕು. ಸಮುದ್ರ, ನದಿ, ಕಾಡು, ಹಿಮ ಶಿಖರ, ಬಯಲು, ಆಕಾಶ ಇವೆಲ್ಲ ನನ್ನಲ್ಲಿ ಬರಹ ಹುಟ್ಟಿಸು ತ್ತವೆ. ಪಾತ್ರ ಬಂದು ಕೆಣಕಿದಂತಾಗುತ್ತದೆ. ಮಾಡಿಕೊಂಡ ರಿಸರ್ಚ್‌ಗೆ, ಸಂಪಾದಿಸಿದ ಮಟೀರಿ ಯಲ್ಲಿಗೆ ಕಥಾರೂಪ ಒದಗಿಸುವುದಷ್ಟೆ ನನ್ನ ಕೆಲಸ. 'ಹಿಮಾಗ್ನಿ' ನನ್ನ ಮಹತ್ವಾ ಕಾಂಕ್ಷೆಯ ಕಾದಂಬರಿ. ಬಹುಶಃ ಅರವತ್ತೆರಡನೆಯ ಕೃತಿ. ಸಾಯುವ ಹೊತ್ತಿಗೆ ನೂರು ಮುಟ್ಟುತ್ತೇನಾ? I am hopeful.

ಇನ್ನು ತಿರುಗಿದ್ದು ಸಾಕು : ಇಲ್ಲೇ ಕುಳಿತು ಬರೆಯಿರಿ ಅಂದದ್ದು ನನ್ನ ಸಿಬ್ಬಂದಿ. ನನಗೂ ಆಫೀಸೆಂಬ ಈ ಶಕ್ತಿ ಪೀಠ ದಿಂದ ತುಂಬ ದಿನ ದೂರ ಉಳಿದರೆ ಚಡಪಡಿಕೆಯಾಗು ತ್ತದೆ. ಇನ್ನು ಕೆಲವು ದಿನ, Zಠಿ ಛಿZoಠಿ 'ಹಿಮಾಗ್ನಿ' ಮುಗಿ ಯುವ ತನಕ ಇನ್ನೆಲ್ಲೂ ಹೋಗುವುದಿಲ್ಲ ಅಂತ ತೀರ್ಮಾನಿಸಿದ್ದೇನೆ. ಜಪ್ಪಯ್ಯ ಅಂದರೂ ಸಭೆ ಗಳಿಗೆ ಹೋಗಲಾರೆ. ಹೊಸ ಪುಸ್ತಕ ಖರೀದಿಸ ಬಾರದು. ಖರೀದಿಸಿರುವುದನ್ನೆಲ್ಲ ಓದಿ ಮುಗಿ ಸಬೇಕು. ಅಷ್ಟಕ್ಕೆ ಆಯುಸ್ಸು ಮುಗಿಯುತ್ತ ದೇನೋ?

ಆಕೆಯ ಪಾತ್ರ ಚಿತ್ರಿಸುವಾಗ ಅನಿವಾ ರ್ಯವಾಗಿ ಸೋನಿಯಾ ಗಾಂ ಕಣ್ಣೆದುರಿಗೆ ಬಂದು ನಿಲ್ಲುತ್ತಾರೆ. ಪಾತ್ರಕ್ಕೆ ನಾನಿಟ್ಟಿರುವ ಹೆಸರು ಮಾಯಿನೋ ಗಾಂ. ಓದುತ್ತ ಓದುತ್ತ ಈ ಕಾದಂಬರಿ ಎಲ್ಲೋ ಒಂದು ಕಡೆ ಮುಸ್ಲಿಮರ ವಿರುದ್ಧ ಕೆರಳುತ್ತಿದೆಯಾ ಅನ್ನಿಸಿತು. ಕೆಲವು ಸಾಲು ಗಳನ್ನು ತಿದ್ದಿದೆ. ಮತ್ತೆ ಬರೆದೆ. ಆದರೂ ಕೆಲವು ಪುಟಗಳಲ್ಲಿ ಮುಸ್ಲಿಮರ ವಿರುದ್ಧ ಪಾತ್ರಗಳಿಗಿರುವ ಮುನಿಸು ಉಳಿದೇ ಇದೆ. ಅದು ಅನಿವಾರ್ಯ : ಕಾದಂಬರಿಯ ಹಂದರವೇ ಹಾಗಿದೆ. ಆದರೆ ಒಂದು ಅನೂಹ್ಯ ತಿರುವು ಓದುಗನನ್ನು ದಿಗ್ಭ್ರಮೆಗೆ, ರೋಮಾಂ ಚನಕ್ಕೆ ಈಡು ಮಾಡದಿದ್ದರೆ, ಅದು ನಾನು ಬರೆ ದದ್ದಲ್ಲ. ಅಲ್ಲವೆ? ಸಂಪೂರ್ಣವಾಗಿ ಅದರಲ್ಲೇ ತೊಡಗಿ ಕೊಂಡಿದ್ದೇನೆ.

ಕಳೆದ ಸಂಚಿಕೆಯಲ್ಲಿ ಕೆಲವು ದೋಷಗಳಾಗಿವೆ. ಒಂದೆರಡು ಹೆಡ್ಡಿಂಗ್‌ಗಳು ನಮ್ಮ 'ಪತ್ರಿಕೆ'ಯ ಅಭಿರುಚಿಗೆ ಹೊಂದುವಂತಹವಲ್ಲ ಅಂತ ಅನೇಕರಿಗೆ ಅನ್ನಿಸಿದೆ : ನನಗೂ. ಅಪಚಾರ, ಅಚಾತುರ್ಯಗಳಿಗೆ ಕ್ಷಮೆ ಕೇಳುತ್ತೇನೆ. ಹೊಣೆ ನನ್ನದು. - ಬೆಳಗೆರೆ

Read Archieves of 10 September, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books