Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

Belagere Books & Coffee

ಗಾಂಧಿ ಬಜಾರ್‌ಗೆ ನಾನಿಟ್ಟ ಹೆಸರು ‘ಹೂವು ಹಣ್ಣಿನ ಬೀದಿ’. ಅಲ್ಲಿಂದ ನೀವು ಹೂವು-ಹಣ್ಣಿನ ಅಂಗಡಿಗಳನ್ನು ತೆರವು ಮಾಡಿಸಿ ಬಿಟ್ಟರೆ ಉಳಿಯೋದು ಏನೂ ಇಲ್ಲ. ಹೂವು ಕೊಳ್ಳಲಿಕ್ಕೆ, ಹಣ್ಣು ಕೊಳ್ಳಲಿಕ್ಕೆ, ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲಿಕ್ಕೆ, ರೋಟಿಘರ್‌ನಲ್ಲಿ ಊಟ ಮಾಡುವುದಕ್ಕೆ ಬಂದಾಗ ಬೆಳಗೆರೆಯ ಈ ಪುಟ್ಟ ಪುಸ್ತಕದ ಅಂಗಡಿ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ನೆನಪಾದರೆ ಸಾಕು.

ಬಿಬಿಸಿಯಲ್ಲಿ ಕೇವಲ ನನ್ನ ಪುಸ್ತಕವನ್ನಲ್ಲ, ಕನ್ನಡ-ಇಂಗ್ಲಿಷಿನ ಸಮಸ್ತ ಲೇಖಕರವೂ ಪುಸ್ತಕಗಳನ್ನ ಹಾಗೂ ಸಿಡಿಗಳನ್ನ ಅಲ್ಲಿ ಮಾರಾಟ ಮಾಡಲಾಗುವುದು: ಬೆಳಗ್ಗೆ 9ರಿಂದ ರಾತ್ರಿ 9ರ ತನಕ. ಕೆಲವು ಸಂಜೆಗಳಲ್ಲಿ ಬಿಡುವಾದಾಗ ನಾನೇ ಬಂದು ಪುಸ್ತಕ ಮಾರಲು ಕುಳಿತಿರುತ್ತೇನೆ. ಉಚಿತ ಕಾಫಿಯ ಜೊತೆಗೆ, ನೀವು ಬಯಸಿದ್ದೇ ಆದರೆ ನನ್ನದೊಂದು ಆಟೋಗ್ರಾಫ್.

ಪ್ರತೀ ತಿಂಗಳಿಗೊಮ್ಮೆ ಕನ್ನಡದ ಹಿರಿಯ ಸಾಹಿತಿಯೊಬ್ಬರನ್ನು ಕರೆಯಿಸಿ, ಒಂದು ಸಂಜೆ ಅವರೊಂದಿಗೆ ಹರಟುವ, ಅವರ ಪುಸ್ತಕಕ್ಕೆ ಆಟೋಗ್ರಾಫ್ ತೆಗೆದುಕೊಳ್ಳುವ, ಫೊಟೋ ತೆಗೆಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಲಿದ್ದೇನೆ. ಅಂಗಡಿಯನ್ನು ಕಷ್ಟಪಟ್ಟು ಹುಡುಕುವ ಪ್ರಶ್ನೆಯೇ ಇಲ್ಲ. ಆ ಕಡೆಯಿಂದ ಬಂದರೆ ವಿಶ್ವ ಪ್ರಸಿದ್ಧ ‘ವಿದ್ಯಾರ್ಥಿ ಭವನ’ದಿಂದ ಐದನೆಯ ಮಳಿಗೆ. ಈ ಕಡೆಯಿಂದ ಬಂದರೆ ‘ರೋಟಿ ಘರ್’ನಿಂದ ಎರಡನೆಯ ಮಳಿಗೆ.

ಮಳಿಗೆಯ ಪೂರ್ಣ ವಿಳಾಸ:

Belagere Books and Coffee

No. 2, Ground Floor, Gandhi Bazar main road,
Basavanagudi, Bangalore-560004.
Phone: 080-40915698,
Email: belagerebookscoffee@gmail.com

ಬೆಳಗೆರೆ ಬುಕ್ಸ್ ಅಂಡ್ ಕಾಫಿ

ನಂ.2, ನೆಲಮಹಡಿ, ಗಾಂಧಿಬಜಾರ್ ಮುಖ್ಯ ರಸ್ತೆ,
ಬಸವನಗುಡಿ, ಬೆಂಗಳೂರು-560004
ದೂರವಾಣಿ: ಕಚೇರಿ: (080) 40915698

 

Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books