Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಇಷ್ಟೆ ಸಾಕೆಂದಿದ್ದೆಯಲ್ಲೋ, ಇಂದು ಏನಿದು ಸೂಚನೆ?

\'\'ಅಣ್ಣಾ, ಇದಕ್ಕೆ ನಾವು invest ಮಾಡಿರೋದು ಹೆಚ್ಚಲ್ಲ. ಅಳಿಯ ರಂಜಿತ್ invest ಮಾಡಿರೋದೇ ಹೆಚ್ಚು. ಆದರೂ ಗಾಂಧಿಬಜಾರ್‌ನಲ್ಲಿ ಮಳಿಗೆ ಅಂದ ಮೇಲೆ ಅಳಿಯನದೇ ಆದರೂ ಕೊಡೋ ಬಾಡಿಗೆ, ನೌಕರರ ಸಂಬಳ, ಪುಸ್ತಕಗಳ ಖರೀದಿ, ದಿನ ನಿತ್ಯದ maintainance ಇವೆಲ್ಲ ಇದ್ದೇ ಇರ‍್ತವೆ. ದಿನಕ್ಕೆ ಇಂತಿಷ್ಟು ಸಾವಿರ ಅಂತ ವ್ಯಾಪಾರ ಆದರೇನೇ ನಾವು ಲಾಭವೂ ಅಲ್ಲದ-ನಷ್ಟವೂ ಅಲ್ಲದ ಬ್ರೇಕ್ ಈವನ್ ಎಂಬ ಸ್ಥಿತಿಗೆ ಬರುತ್ತೇವೆ. ಅದೇ ಕೆಲವು ತಿಂಗಳು ಹಿಡೀಬಹುದು. ಅಲ್ಲೀ ತನಕ ನಷ್ಟ ಭರಿಸೋದು ಅನಿವಾರ್ಯವಾಗುತ್ತೆ\" ಎಂದು ನನ್ನ ಸಿ.ಇ.ಓ. ಉಮೇಶ ಹೆಗಡೆ ಬೆಳಗೆರೆ ಬುಕ್ಸ್ ಅಂಡ್ ಕಾಫಿ ಆರಂಭಿಸುವಾಗಲೇ ಹೇಳಿದ್ದ.

ಆ ಮಟ್ಟಿಗೆ ನಾನೂ ಚಿಕ್ಕ ಪುಟ್ಟ ನಷ್ಟಕ್ಕೆ ಸಿದ್ಧನಾಗಿದ್ದೆ. ಏಕೆಂದರೆ, ಪುಸ್ತಕದ ಮಳಿಗೆ ನನ್ನ ಕನಸಿನ ಕೂಸಾಗಿತ್ತು. Big desire. ನನ್ನ ನಿರೀಕ್ಷೆ ಮೀರಿ ಅದರ ಉದ್ಘಾಟನೆ ಅದ್ದೂರಿಯಾಗಿ ಆಯಿತು. ಕೆಲ ಹೊಸ ಹುಡುಗರನ್ನು ಕೆಲಸಕ್ಕೆ ತಗೊಂಡೆ. \'ಭಾವನಾ ಪ್ರಕಾಶನ\'ದಲ್ಲಿ ಪಳಗಿದ್ದ ನಮ್ಮ ಇಲ್ಲಿನ ಸಿಬ್ಬಂದಿಯವರನ್ನು ಅಲ್ಲಿಗೆ ಕಳಿಸಿದೆ. ಸಂಜೆಗಳಲ್ಲಿ ನಾನೂ ಹೋಗಿ ಕೂಡತೊಡಗಿದೆ. ಇಂಥವೇ ಪುಸ್ತಕಗಳನ್ನಿಡಿ ಅಂತ ಸೂಚಿಸುವುದು ಸಾಧ್ಯವಾಗಿಲ್ಲವಾದರೂ ಒಂದಷ್ಟು ಉತ್ತಮ ಪುಸ್ತಕ ತಂದಿರಿಸಿ. ಇಲ್ಲಿ ಕೇವಲ ರವಿ ಬೆಳಗೆರೆಯವಷ್ಟೆ ಅಲ್ಲ ಎಲ್ಲ ಕನ್ನಡ ಮತ್ತು ಕೆಲವು ಇಂಗ್ಲಿಷ್ ಲೇಖಕರವೂ ಕೃತಿಗಳು ದೊರೆಯುತ್ತವೆ ಎಂಬುದನ್ನು ದಾಖಲಿಸಿದೆ. ಪುಸ್ತಕದ ಅಂಗಡಿಗಳ drab ವಾತಾವರಣ ಬದಲಿಸಿ, ಅಲ್ಲಿಷ್ಟು ರಂಗು-ಸಂಗೀತ ತರುವ ಯತ್ನ ಮಾಡಿದೆ.

ಇದೆಲ್ಲ ನೀಡಿದ ಫಲವೆಂದರೆ, ನಿನ್ನೆಗೆ ಅಂಗಡಿ ಆರಂಭಿಸಿ ಒಂದು ತಿಂಗಳಾಗಿದೆ. ಕೂತು ಲೆಕ್ಕ ಮಾಡಿದ ಉಮೇಶ ಕನ್ನಡಕದ ಹಿಂದಿನ ಕಣ್ಣರಳಿಸಿ, \"ಅಣ್ಣಾ, ಬ್ರೇಕ್ ಈವನ್‌ನ ಮಾತು ಬಿಡು.We are making profit\" ಅಂದ. ಅದರ ಅರ್ಥ ಒಂದೂವರೆ ಕೋಟಿ ಮೀರಿ ವ್ಯಾಪಾರವಾಗಿದೆ. ಓದುಗ ದೊರೆಯನ್ನು ಜಿಪುಣ ಅಂದವರು ಯಾರು?

ಇಂಥದೊಂದು ಮಳಿಗೆ ಆರಂಭವಾಗಲು ನನಗೆ ನೆನಪಾದವರು ಕಾರ್ಪೊರೇಟರ್ ಮತ್ತು ಸಿನೆಮಾ ನಿರ್ಮಾಪಕ ಮುನಿರತ್ನಂ ನಾಯ್ಡು, ಅವರ ಬೀಗರೂ ನನ್ನ ಮಿತ್ರರೂ ಆದ ರಾಕ್‌ಲೈನ್ ವೆಂಕಟೇಶ್, ಬಹುಕಾಲದ ನನ್ನ ಓದುಗರು, ಚಿತ್ರೋದ್ಯಮಿಗಳೂ ಆದ ಆನೇಕಲ್ ಬಾಲರಾಜ್. ಮೂವರು ಮಿತ್ರರಿಗೂ ನಾನು ಋಣಿ, ಆಭಾರಿ.

ಏನೇ ಮಾಡಿದರೂ ಅಕ್ಷರ ಪ್ರಪಂಚಕ್ಕೆ ಸಂಬಂಧಿಸಿದುದನ್ನು ಮಾಡುತ್ತೇನೆ ಎಂಬುದು ನನ್ನ ಶಪಥ. ಈಗ ಪುಸ್ತಕ ಮಳಿಗೆ ಆಯ್ತಲ್ಲ? ಅದರ ಅಡಿಯಲ್ಲೇ, ಸೆಲ್ಲರ್‌ನಲ್ಲಿ ಪುಟ್ಟ ಮಳಿಗೆಯೊಂದು ಬಾಡಿಗೆಗೆ ಸಿಕ್ಕಿದೆ : ಅದೂ ಅಳಿಯನದೇ. ಅಲ್ಲಿ ಮಕ್ಕಳಿಗೆಂದೇ ಒಂದಷ್ಟು ವಿಶೇಷ ಪುಸ್ತಕ, ಕುಳಿತು ಓದಲಿಕ್ಕೆ ಕೊಂಚ space, cartoon ನೋಡಲಿಕ್ಕೆ ಟೀವಿ ಮತ್ತು ಎಲ್ಲ ತರಹದ ಸಿಡಿ, ಡಿ.ವಿ.ಡಿ ದೊರೆಯುವ ಇದೇ BBCಯ ವಿಸ್ತರಣೆ ಮಾಡಲಿದ್ದೇನೆ.

ಪುಸ್ತಕದ ಮಳಿಗೆಯೊಂದು ಒಂದೇ ತಿಂಗಳಲ್ಲಿ ಮರಿ ಹಾಕುತ್ತಿರುವುದು ಇತಿಹಾಸವೇ ಇರಬೇಕು. ಇದೆಲ್ಲ ನಿಮ್ಮ ಔದಾರ್ಯವಲ್ಲದೆ, ಏನು?

ಅಡಿಗರ ಸಾಲು ನೆನಪಾದವು : ಇಷ್ಟೆ ಸಾಕೆಂದಿದ್ದೆಯಲ್ಲೋ...

-ಬೆಳಗೆರೆ

Read Archieves of 12 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books